March 20, 2026

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸುವಿನಂತಹ ಮನುಷ್ಯ: ಎಂ.ಪಿ. ರೇಣುಕಾಚಾರ್ಯ

0
Screenshot_2021-11-16-10-55-26-40_680d03679600f7af0b4c700c6b270fe7.jpg

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸುವಿನಂತಹ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

‘ಬಿಟ್‌ಕಾಯಿನ್‌ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಏಕೆ ಮಾತನಾಡುತ್ತಿಲ್ಲ’ ಎಂಬ ವಿರೋಧ ಪಕ್ಷದ ಮುಖಂಡರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಳಿನ್‌ ಅವರು ಸಂಘಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡವರು. ಅವರದ್ದು ಸೌಮ್ಯ ಸ್ವಭಾವ. ಕಾಂಗ್ರೆಸ್‌ನವರು ಸುದ್ದಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ತಮ್ಮ ಕರ್ಮಕಾಂಡವನ್ನು ನೋಡಿಕೊಳ್ಳಲಿ’ ಎಂದರು.

Leave a Reply

Your email address will not be published. Required fields are marked *

error: Content is protected !!