ಜಿಮ್‌ಗೆ ನುಗ್ಗಿ ಮಾಲಕನನ್ನು ಗುಂಡಿಕ್ಕಿ ಹತ್ಯೆ: ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ರೆಕಾರ್ಡ್‌ಗಳನ್ನೇ ಕಳವುಗೈದ ಅಪರಿಚಿತರು
ನವದೆಹಲಿ: ಮೂವರು ಅಪರಿಚಿತ ವ್ಯಕ್ತಿಗಳು ಜಿಮ್‌ಗೆ ನುಗ್ಗಿ, ಜಿಮ್ ಮಾಲೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಪ್ರೀತ್ ವಿಹಾರ್‌ನಲ್ಲಿ ನಡೆದಿದೆ. ದುಷ್ಕರ್ಮಿಗಳು ಘಟನೆಯ ಸಾಕ್ಷ್ಯ ನಾಶಪಡಿಸಲು ಜಿಮ್‌ನಲ್ಲಿದ್ದ ಸಿಸಿಟಿವಿ ರೆಕಾರ್ಡ್‌ಗಳನ್ನೇ ಕದ್ದುಕೊಂಡು ಹೋಗಿದ್ದಾರೆ.
ಗುಂಡಿನ ದಾಳಿಗೆ ಬಲಿಯಾದ ಜಿಮ್ ಮಾಲೀಕ ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರು ಜಿಮ್ ಜೊತೆಗೆ ಸ್ಪಾಗಳನ್ನೂ ನಡೆಸುತ್ತಿದ್ದು, ಜಿಮ್ ಉಪಕರಣಗಳನ್ನೂ ಮಾರಾಟ ಮಾಡುತ್ತಿದ್ದರು.
ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಅಗರ್ವಾಲ್ ಜಿಮ್‌ನಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಜಿಮ್ ಪ್ರವೇಶಿಸಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದು, ಅಗರ್ವಾಲ್ ಅವರ ತಲೆಗೆ ಗುಂಡು ತಗುಲಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





