ಮನೆಯಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿ ಸ್ಫೋಟ: ಅಂಗಡಿಯ ಮಾಲಕ ಸೇರಿದಂತೆ ನಾಲ್ವರು ಸಾವು
ಚೆನ್ನೈ: ನಾಮಕ್ಕಲ್ ಜಿಲ್ಲೆಯ ಮನೆಯೊಂದರಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿ ಸ್ಫೋಟಗೊಂಡು ಪಟಾಕಿ ಅಂಗಡಿಯ ಮಾಲೀಕ ಮತ್ತು ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಠಾತ್ತನೆ ಸಂಭವಿಸಿದ ಸ್ಫೋಟದಲ್ಲಿ ಇಲ್ಲಿನ ಮೊಹನೂರಿನಲ್ಲಿರುವ ಮನೆಗೆ ಹಾನಿಯಾಗಿದೆ ಮತ್ತು ಸುತ್ತಮುತ್ತಲಿನ ಮನೆಯ ಇತರ ನಾಲ್ವರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.
ಅಗ್ನಿಶಾಮಕ ದಳದವರು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ.
ಪರವಾನಗಿ ಹೊಂದಿರುವ ತಿಲ್ಲೈ ಕುಮಾರ್ (37) ಎಂಬಾತ ತನ್ನ ಮನೆಯಲ್ಲಿ ಪಟಾಕಿಗಳನ್ನು ಏಕೆ ದಾಸ್ತಾನು ಮಾಡಿದ್ದನು ಎಂಬುದು ಸ್ಪಷ್ಟವಾಗಿಲ್ಲ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.




