ಮೈನಸ್ ಡಿಗ್ರಿ ತಾಪಮಾನದಿಂದ ಭೀಕರ ಚಳಿ: ಅಮೇರಿಕಾದಲ್ಲಿ 31 ಮಂದಿ ಬಲಿ
ವಾಷಿಂಗ್ಟನ್: ಭೀಕರ ಶೀತಮಾರುತವು ಕ್ರಿಸ್‌ಮಸ್ ದಿನದಂದೇ ಲಕ್ಷಾಂತರ ಅಮೆರಿಕರನ್ನು ಸಂಕಷ್ಟಕ್ಕ ದೂಡಿದೆ. ಪೂರ್ವ ಅಮೆರಿಕದ ಕೆಲ ಭಾಗಗಳಲ್ಲಿ ತೀವ್ರ ಹಿಮ ಮತ್ತು ಚಳಿ ಆವರಿಸಿದ್ದು, ಹವಾಮಾನ ಸಂಬಂಧಿತ ಸಾವುಗಳ ಸಂಖ್ಯೆ 31ಕ್ಕೆ ಏರಿದೆ.
ಪಶ್ಚಿಮ ನ್ಯೂಯಾರ್ಕ್‌ನ ಬಫೆಲೊ ನಗರದಲ್ಲಿ ಹಿಮಪಾತ ಹೆಚ್ಚಿದ್ದು, ನಗರವನ್ನೇ ಮುಳುಗಿಸಿದೆ, ಹಲವೆಡೆ ತುರ್ತು ಸೇವೆಗಳನ್ನು ಒದಗಿಸಲು ಸಹ ಸಾಧ್ಯವಾಗುತ್ತಿಲ್ಲ.
‘ಯುದ್ಧ ವಲಯದ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಮತ್ತು ರಸ್ತೆಗಳ ಬದಿಯಲ್ಲಿರುವ ವಾಹನಗಳ ಸ್ಥಿತಿ ಆಘಾತಕಾರಿಯಾಗಿದೆ’ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದರು.
ಬಫೆಲೊದ ನಿವಾಸಿಯೂ ಆಗಿರುವ ಅವರು, ಅಲ್ಲಿ ಎಂಟು ಅಡಿ (2.4-ಮೀಟರ್) ಹಿಮದ ರಾಶಿ ಬಿದ್ದಿದ್ದು, ವಿದ್ಯುತ್ ಕಡಿತಗೊಂಡಿದೆ ಎಂದು ಹೇಳಿದ್ದಾರೆ.





