February 3, 2026

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ: ಪೊಕ್ಸೊ ಪ್ರಕರಣದಡಿ ಆರೋಪಿಯ ಬಂಧನ

0
image_editor_output_image-438505287-1672034428687.jpg

ಪುತ್ತೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಫೋಕ್ಸೋ ಪ್ರಕರಣದಡಿ ಬಂಧಿಸಿರುವ ಘಟನೆ ಪುತ್ತೂರು ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾವು ಮಾಲಡ್ಕ ನಿವಾಸಿಯಾದ ತಕಿಯುದ್ದೀನ್ ಬಂಧಿತ ಆರೋಪಿ.

ಈತ ಸಂತ್ರಸ್ತೆ ಬಾಲಕಿಯ ತಂದೆಯ ಸ್ನೇಹಿತನಾಗಿದ್ದ. ಈತ ಬಾಲಕಿಯ ಮನೆಗೆ ಬಂದು ಹೋಗುತ್ತಿರುವುದಲ್ಲದೆ ಸಲುಗೆಯಿಂದ ಇದ್ದ. ಅಕ್ಟೋಬರ್ ತಿಂಗಳಲ್ಲಿ ಬಾಲಕಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಆತ ಹಿಂಬಾಲಿಸಿಕೊಂಡು ಬಂದು ಪ್ರತ್ಯೇಕವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ನಿನ್ನನ್ನು ಸ್ಕೂಲ್‌ಗೆ ಬಿಡುತ್ತೇನೆ ಎಂದು ಒತ್ತಾಯ ಮಾಡಿರುವುದಲ್ಲದೆ ಬಾರದೇ ಇದ್ದಲ್ಲಿ ನಿನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿರುತ್ತಾನೆ. ಅ.5ರಂದು ರಾತ್ರಿ 12 ಗಂಟೆಗೆ ತಕಿಯುದ್ದೀನ್ ಸಂತ್ರಸ್ತೆಯ ಮನೆಯ ಬಾಗಿಲು ತಟ್ಟಿದ್ದಾನೆ.

ನ.10ರಂದು ಬೆಳಿಗ್ಗೆ ಆಕೆ ಶಾಲೆಗೆ ಹೋಗಲು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆಕೆಯನ್ನು ತಡೆದು ನಿಲ್ಲಿಸಿ ತನ್ನ ಜೊತೆಗೆ ಬೈಕ್‌ನಲ್ಲಿ ಬರುವಂತೆ ಒತ್ತಾಯದಿಂದ ಕರೆದುಕೊಂಡು ಹೋಗಿ ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಡಿ.22ರಂದು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!