February 3, 2026

ರೈಲು ಢಿಕ್ಕಿ: 90 ಕುರಿಗಳು, 8 ರಣಹದ್ದುಗಳು ಮೃತ್ಯು

0
image_editor_output_image-27571902-1672033659606.jpg

ಲಖನೌ: ರೈಲು ಡಿಕ್ಕಿ ಹೊಡೆದ ಪರಿಣಾಮ 90 ಕುರಿಗಳು ಮತ್ತು 8 ರಣಹದ್ದುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.

ಪಂಚ ಪರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಸರಯು ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.

ನಾಯಿಗಳು ಕುರಿಗಳ ಹಿಂಡನ್ನು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಗಾಬರಿಗೊಂಡ ಕುರಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ಈ ಸಂದರ್ಭ ಆ ಮಾರ್ಗದಲ್ಲಿ ಬಂದ ರೈಲೊಂದು ಡಿಕ್ಕಿ ಹೊಡೆದು ಕುರಿಗಳು ಸಾವಿಗೀಡಾಗಿವೆ ಎಂದು ವರದಿ ತಿಳಿಸಿದೆ.

ಇದಾದ ಸ್ವಲ್ಪ ಸಮಯದ ಬಳಿಕ ಸತ್ತ ಕುರಿಗಳ ಮಾಂಸ ತಿನ್ನಲು ಬಂದಿದ್ದ ರಣಹದ್ದುಗಳಿಗೆ ಮತ್ತೊಂದು ರೈಲು ಡಿಕ್ಕಿಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!