February 3, 2026

ಮದುವೆಯಾಗುವಂತೆ ಯುವತಿಗೆ ಮನಬಂದಂತೆ ಥಳಿತ: ಯುವಕನ  ಮನೆಯನ್ನು ಬುಲ್ಡೋಜರ್‌ನಿಂದ ನೆಲಸಮ

0
image_editor_output_image761290074-1672032587602.jpg

ಭೋಪಾಲ್: ಮದುವೆಯಾಗು ಎಂದು ಕೇಳಿದ ಯುವತಿಯನ್ನು ಮನಬಂದಂತೆ ಥಳಿಸಿದ ಯುವಕನ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

19 ವರ್ಷದ ಯುವತಿಯನ್ನು ಆರೋಪಿ ಯುವಕ ಪಂಕಜ್ ತ್ರಿಪಾಠಿ (24) ಅಮಾನುಷವಾಗಿ ಥಳಿಸಿದ್ದ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಶನಿವಾರ ತ್ರಿಪಾಠಿಯನ್ನು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಂಧಿಸಲಾಗಿದೆ.

ಇಂದು ಆರೋಪಿಯ ಮನೆಯನ್ನು ಕೆಡವಲು ಜಿಲ್ಲಾಡಳಿತ ಬುಲ್ಡೋಜರ್ ಅನ್ನು ಕಳುಹಿಸಿದೆ. ಪೊಲೀಸರ ಬೆಂಬಲದೊಂದಿಗೆ ಬುಲ್ಡೋಜರ್ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!