February 3, 2026

ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೆರ್ಣಂಕಿಲ ಗ್ರಾಮ ಲೆಕ್ಕಾಧಿಕಾರಿ

0
image_editor_output_image-332147792-1671595930683.jpg

ಉಡುಪಿ: ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸರಕಾರಿ ನೌಕರನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.

ಪೆರ್ಣಂಕಿಲ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಎನ್.ಪಿ ಲೋಕಯುಕ್ತ ಬಲೆಗೆ ಬಿದ್ದ ಸರಕಾರಿ ನೌಕರ.

ವ್ಯಕ್ತಿಯೊಬ್ಬರಿಂದ ಜಮೀನನ್ನು ಸಕ್ರಮ ಮಾಡಿಕೊಡುವುದಕ್ಕಾಗಿ ವಿಎ ಹರೀಶ್ 10 ಸಾವಿರ ಲಂಚ ಕೇಳಿದ್ದ. ಹಣ ಬೇಡಿಕೆ ಇಟ್ಟ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರುದಾರ 10 ಸಾವಿರ ನೀಡುತ್ತಿದ್ದಾಗ ಕಾರ್ಯಚರಣೆ ನಡೆಸಲಾಗಿದ್ದು, ಲಂಚದ ಹಣವ ಪಡೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಗ್ರಾಮ ಲೆಕ್ಕಿಗ ಹರೀಶ್ ನನ್ನು ದಸ್ತಗಿರಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!