ಬಾಬಾ ರಾಮ್‌ದೇವ್ ಪತಂಜಲಿ ಉತ್ಪನ್ನಗಳನ್ನು ನಿಷೇಧಿಸಿದ ನೇಪಾಳ ಸರಕಾರ
ಕಠ್ಮಂಡು: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಔಷಧ ಉತ್ಪಾದನ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಭಾರತದ 16 ಫಾರ್ಮಾಸ್ಯುಟಿಕಲ್ ಕಂಪೆನಿಗಳನ್ನು ನೇಪಾಲ ಸರಕಾರ “ಕಪ್ಪು ಪಟ್ಟಿಗೆ’ ಸೇರಿಸಿದೆ.
ವಿಶೇಷವೆಂದರೆ ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರು ಮಾಡುವ “ದಿವ್ಯ ಫಾರ್ಮಸಿ’ ಕೂಡ ಇದರಲ್ಲಿ ಸೇರಿದೆ. ಈ ಕಂಪೆನಿಗಳ ಔಷಧಗಳನ್ನು ಪೂರೈಕೆ ಮಾಡುವಂಥ ನೇಪಾಲದ ಸ್ಥಳೀಯ ಏಜೆಂಟ್‌ಗಳಿಗೆ ಡಿ.18ರಂದೇ ಸುತ್ತೋಲೆ ಕಳುಹಿಸಿರುವ ಅಲ್ಲಿನ ಸರಕಾರ, ಕೂಡಲೇ ಆ ಔಷಧಗಳನ್ನು ವಾಪಸ್ ಪಡೆಯಿರಿ ಎಂದು ಸೂಚಿಸಿದೆ.