February 3, 2026

ಪವಿತ್ರ ಉಮ್ರಾ ಯಾತ್ರೆಗೆಂದು ತೆರಳಿದ್ದ ಕಡಬದ ವ್ಯಕ್ತಿ ನಿಧನ

0
image_editor_output_image1324988554-1671599224666.jpg

ಕಡಬ: ಪವಿತ್ರ ಉಮ್ರಾ ಯಾತ್ರೆಗೆಂದು ತೆರಳಿದ್ದ ಕಡಬದ ವ್ಯಕ್ತಿಯೋರ್ವರು ಮಕ್ಕಾದಲ್ಲಿ ಹೃದಯಾಘಾತದಿಂದ ನಿಧನರಾದ ಬಗ್ಗೆ ವರದಿಯಾಗಿದೆ.

ಕಡಬದ ಕೋಡಿಂಬಾಳದ ನಿವಾಸಿ, ಆಟೋ ಚಾಲಕರಾಗಿದ್ದ ಅಬೂಬಕರ್ ಮೃತಪಟ್ಟವರು. ಅಬೂಬಕರ್ ಅವರು ತನ್ನ ಪತ್ನಿ ಸೇರಿದಂತೆ ನಲ್ವತ್ತು ಜನರ ತಂಡದೊಂದಿಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿದ್ದರು. ಸೌದಿ ಅರೇಬಿಯಾದ ಮಕ್ಕಾದಲ್ಲಿ ಅಬೂಬಕರ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಮೃತದೇಹವನ್ನು ಮಕ್ಕಾದಲ್ಲೇ ದಫನಕ್ರಿಯೆ ಮಾಡಲಾಗುವುದೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!