ಶಾರುಖ್ ಖಾನ್ ನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ: ಅಯೋಧ್ಯೆ ಸ್ವಾಮೀಜಿಯಿಂದ ಕೊಲೆ ಬೆದರಿಕೆ
ನವದೆಹಲಿ: ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಎಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ನಡುವೆ ಅಯೋಧ್ಯೆಯ ಸ್ವಾಮೀಜಿ ಮಹಾಂತ ಪರಮಹಂಸ ಆಚಾರ್ಯ ಅವರು ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾದ ಬಗ್ಗೆ, ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ʼಬೇಷರಂ ರಂಗ್ʼ ಹಾಡಿನಲ್ಲಿ ಕೇಸರಿನ ಬಣ್ಣವನ್ನು ಅವಮಾನಿಸಲಾಗಿದೆ. ಈ ಬಗ್ಗೆ ಸನಾತನ ಧರ್ಮದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸಿನಿಮಾದ ಪೋಸ್ಟರನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನಾನು ಶಾರುಖ್ ಖಾನ್ ನನ್ನು ಭೇಟಿಯಾದರೆ ಅವನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದಾರೆ.




