August 13, 2026

ಬಂಟ್ವಾಳ: ಎರಡು ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿ: ಚಾಲಕ ಸಹಿತ ಪ್ರಯಾಣಿಕರಿಗೆ ಗಾಯ

0
image_editor_output_image1021210698-1671255201372

ಬಂಟ್ವಾಳ: ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕರ ಸಹಿತ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಸಿರೋಡಿನ ನೇತ್ರಾವತಿ ಸೇತುವೆ ಬಳಿ ಡಿ.17 ರಂದು ಶನಿವಾರ ಬೆಳಿಗ್ಗೆ ನಡೆದಿದೆ.

ಬಿಸಿರೋಡಿನ ನೇತ್ರಾವತಿ ಸೇತುವೆ ಬಳಿ ಸೆಲಿನಾ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಹಾಗೂ ಸಜೀಪ ರೂಟ್ ನ ಶಾರದ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಿಂದ ಬಸ್ ಚಾಲಕರು ಹಾಗೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 8 ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ.

ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಬಸ್ ಗೆ ಡಿಕ್ಕಿಯಾಗಿದ್ದು ಯಾವುದೇ ಅಪಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತ ದಲ್ಲಿ ಗಾಯಗೊಂಡ ವ್ಯಕ್ತಿಗಳ ಮಾಹಿತಿ ಲಭ್ಯವಾಗಿಲ್ಲ. ‌‌ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು.

ಗಜಲಕ್ಷಿ ಕ್ರೇನ್ ಮೂಲಕ ಬಸ್ ಗಳನ್ನು ಸ್ಥಳದಿಂದ ಬದಿಗೆ ಸರಿಸಿದ ಬಳಿಕ ಸಂಚಾರಕ್ಕೆ ಅನುಕೂಲ ವಾಯಿತು.

Leave a Reply

Your email address will not be published. Required fields are marked *

You may have missed

error: Content is protected !!