September 20, 2024

ಮಂಗಳೂರು: ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ
ಖಾಸಗಿ ಸ್ಲೀಪಿಂಗ್ ಕೋಚ್ ಬಸ್: ಲಾಡ್ಜ್ ಗಳಲ್ಲಿ ಜೋಡಿಗಳಿಗೆ ದಾಖಲೆ ನೀಡುವ ನಿಯಮ: ಬಸ್ ಗಳಲ್ಲಿ ಯಾವುದೇ ನಿಯಮ ಇಲ್ಲದ ಕಾರಣ ಬಸ್ ಗಳ ಬಳಕೆಯಾಗುತ್ತಿದೆಯಾ?

0

ಮಂಗಳೂರು: ಖಾಸಗಿ ಸ್ಲೀಪಿಂಗ್ ಕೋಚ್ ಬಸ್ ಗಳು ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಹೈಟೆಕ್ ರೂಮ್ ಗಳನ್ನು ಮಾಡಿ ಅನೈತಿಕ ಚಟುವಟಿಕೆಗಳನ್ನು ಮಾಡುವ ದಂದೆ ಕಡಿಮೆ ಆಗುತ್ತಿದ್ದು, ಇದರ ಬದಲಿಗೆ ಹೈಟೆಕ್ ಸ್ಲೀಪರ್ ಬಸ್ ಗಳನ್ನು ಬಳಕೆಮಾಡಿಗೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಹೋಟೆಲ್ ಹಾಗೂ ಇತರ ಲಾಡ್ಜ್ ಗಳಲ್ಲಿ ರೂಮ್ ಮಾಡಿ ಜೋಡಿಗಳ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಖುಷಿ ಪಟ್ಟರೆ ಇತ್ತ ಐಷಾರಾಮಿ ಖಾಸಗಿ ಬಸ್ ಗಳಲ್ಲಿ ಜೋಡಿಗಳ ಪ್ರಯಾಣ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

ಲಾಡ್ಜ್ ಗಳಲ್ಲಿ ಜೋಡಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳ ವಿಚಾರಣೆ ಸಹಿತ ಸಂಘಟನೆಗಳ ದಾಳಿಗಳಿಗೆ ಹೆದರಿ ಈ ರೀತಿಯಲ್ಲಿ ಬಸ್ ಗಳನ್ನು ಉಪಯೋಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ಪ್ರಯಾಣ ಮಾಡುವ ವೇಳೆ ಜೋಡಿಗಳಿಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲ…ಗೌಪ್ಯತೆ ಗೆ ಹೆಚ್ಚು ಸಹಕಾರಿ ಆಗುತ್ತದೆ ಎನ್ನಲಾಗಿದೆ.

ದೂರದ ಬೆಂಗಳೂರು ಸಹಿತ ಅನೇಕ ಊರುಗಳಿಗೆ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ಟಿಕೆಟ್ ಕಾದಿರಿಸುವ ಜೋಡಿಗಳು ಅದೇ ಬಸ್ ನಲ್ಲಿ ವಾಪಾಸು ಊರಿಗೆ ಬರುವಂತೆ ರಿಟರ್ನ್ ಟಿಕೆಟ್ ಕೂಡ ಮಾಡಲಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇಂತಹ ಚಟುವಟಿಕೆಗಳು ಮುಂದೊಂದು ದಿನ ಸಮಾಜದಲ್ಲಿ ಅಶಾಂತಿ ಹಬ್ಬಲು ಮೂಲಕಾರಣವಾಗಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿಬಂದಿದೆ.

ಡಿ.15 ರಂದು ಗುರುವಾರ ರಾತ್ರಿ ಬೆಂಗಳೂರಿಗೆ ತೆರಳುವ ದುರ್ಗಾಂಬಾ ಬಸ್ ನಲ್ಲಿ ಅನ್ಯಕೋಮಿನ ಜೋಡಿಗಳು ಪ್ರಯಾಣ ನಡೆಸಿ ಗೊಂದಲಕ್ಕೆ ಕಾರಣವಾದ ಬಳಿಕ ಸಾರ್ವಜನಿಕ ವಲಯದಲ್ಲಿ ಈ ಮಾತುಗಳು ಕೇಳಿ ಬಂದಿವೆ.

ಒಂದು ವೇಳೆ ಇಂತಹ ದಂದೆಗಳು ಹೈಟೆಕ್ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ನಡೆಯುವುದೇ ಆದರೆ ಪೋಲೀಸರು ಕ್ರಮ ಕೈಗೊಳ್ಳುವ ಅನಿವಾರ್ಯತೆ ಕೂಡ ಇದೆ.

ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುವ ಮೊದಲೇ ಎಚ್ಚರಿಕೆ ವಹಿಸುವ ಜವಬ್ದಾರಿ ಇಲಾಖೆಯ ಮೂಲಕ ಆಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!