October 19, 2026

ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಮೀಟ್: ಸೀನಿಯರ್ ಟ್ರಿಪಲ್ ಜಂಪ್ ನಲ್ಲಿ ಬಾಕ್ರಬೈಲ್ ನ ವೈಷ್ಣವಿ ಎಚ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

0
image_editor_output_image175358676-1792412138623

ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಮೀಟ್–2026ರ ಸೀನಿಯರ್ ಗರ್ಲ್ಸ್ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಬಾಕ್ರಬೈಲಿನ ವೈಷ್ಣವಿ ಎಚ್. ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.

ವೈಷ್ಣವಿ ಅವರು ಕುಂಬಳೆ ಜಿ.ಎಚ್.ಎಸ್.ಎಸ್. ಶಾಲೆಯ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಬಾಕ್ರಬೈಲಿನ ಶಕೀಲಾ ಮತ್ತು ಹರೀಶ್ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರಾದ ರಾಹುಲ್ ಸರ್ ಅವರ ದಕ್ಷ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ವೈಷ್ಣವಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!