March 20, 2026

ಪಂಪ್‌ವೆಲ್‌ ಬಸ್‌ನಿಲ್ದಾಣದ ಬಳಿ ನೋಟು ಪತ್ತೆ ಪ್ರಕರಣ: ತಮಗೆ ಸೇರಿದ್ದೆಂದು ಹೇಳಿಕೊಂಡು ಮೂವರು ಬಂದಿದ್ದಾರೆ: ಕಮಿಷನರ್ ಶಶಿಕುಮಾರ್

0
image_editor_output_image-1080473660-1671002187113.jpg

ಮಂಗಳೂರು: ನಗರದ ಪಂಪ್‌ವೆಲ್‌ ಬಸ್‌ನಿಲ್ದಾಣದ ಬಳಿ ನ.26 ರಂದು ಪತ್ತೆಯಾದ ನೋಟುಗಳ ಕಂತೆಯ ತಮಗೆ ಸೇರಿದ್ದೆಂದು ಹೇಳಿಕೊಂಡು ಮೂವರು ಬಂದಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಮೂವರು ಹಣ ತಮ್ಮದು ಎಂದು ಹೇಳಿಕೊಂಡಿದ್ದು ಅವರಲ್ಲಿ ಯಾರೂ ಅದನ್ನು ಸಾಬೀತುಪಡಿಸಲು ಯಾವುದೇ ಪೂರಕಪುರಾವೆಗಳನ್ನು ಒದಗಿಸಿಲ್ಲ ಎಂದು ಅವರು ಹೇಳಿದ್ದಾರೆ.

ನವೆಂಬರ್ 26 ರಂದು ಪಂಪ್‌ವೆಲ್ ಬಸ್ ನಿಲ್ದಾಣದ ಬಳಿ ಸ್ಥಳೀಯ ನಿವಾಸಿಗಳಾದ ಶಿವರಾಜ್ ಮತ್ತು ತುಕಾರಾಂ ಅವರಿಗೆ ನೋಟುಗಳ ಬಂಡಲ್ ಸಿಕ್ಕಿದ್ದು, ಅವರು ತಮ್ಮ ನಡುವೆ ಹಣವನ್ನು ಹಂಚಿಕೊಂಡಿದ್ದಾರೆ. ನಂತರ ಶಿವರಾಜ್ ಅವರ ಶರ್ಟ್ ಜೇಬಿನಲ್ಲಿ ನೋಟುಗಳ ಕಂತೆ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಶಿವರಾಜ್ ಅವರನ್ನು ವಶಕ್ಕೆ ಪಡೆದು 49 ಸಾವಿರ ರೂ. ವಶಕ್ಕೆ ಪಡೆದಿದ್ದರು. ಮಾಧ್ಯಮಗಳಲ್ಲಿ ಈ ವಿಷಯ ವರದಿಯಾದಾಗ ತುಕಾರಾಂ ತನ್ನ ಬಳಿಯಿದ್ದ 2.99 ಲಕ್ಷ ರೂಪಾಯಿಯನ್ನು ತನ್ನ ಕುಟುಂಬ ಸದಸ್ಯರ ಮೂಲಕ ಠಾಣೆಗೆ ಹಿಂದಿರುಗಿಸಿದ್ದರು. ಆದರೆ ಹಣದ ಮೂಲವನ್ನು ಮತ್ತು ಬಂಡಲ್ ನಲ್ಲಿದ್ದ ಒಟ್ಟು ಮೊತ್ತವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ.

ಇನ್ನು ಹಣ ತಮ್ಮದೆನ್ನುವುದನ್ನು ನ್ಯಾಯಾಲಯದಲ್ಲಿಯೇ ಸಾಬೀತುಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ವ್ಯಕ್ತಿಗಳಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!