September 29, 2026

ತಂದೆಯ ದೇಹವನ್ನು 30 ತುಂಡರಿಸಿ ಕೊಳವೆ ಬಾವಿಗೆ ತುರುಕಿದ ಮಗ..!

0
IMG-20221213-WA0021.jpg

ಬಾಗಲಕೋಟೆ: ಮಗನೇ ತಂದೆಯ ಹತ್ಯೆ ನಡೆಸಿ ದೇಹ ತುಂಡು – ತುಂಡು ಮಾಡಿ ಅದನ್ನು ಕೊಳವೆಬಾವಿಯಲ್ಲಿ ತುರುಕಿದ ಪ್ರಕರಣ ಬಾಗಲಕೋಟೆಯ ಮುಧೋಳದಲ್ಲಿ ಬೆಳಕಿಗೆ ಬಂದಿದೆ.

ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ. ಪಾನಮತ್ತನಾಗಿ ಬಂದು ಹೊಡೆಯುತ್ತಿದ್ದ, ಬೈಯುತ್ತಿದ್ದ ಎಂಬ ಕಾರಣಕ್ಕೆ ಕುಳಲಿ ಅವರನ್ನು ಅವರ ಪುತ್ರ ವಿಠ್ಠಲ ಕುಳಲಿ (20) ಡಿ.6 ರಂದು ಮಧ್ಯರಾತ್ರಿ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.ತೀವ್ರ ಗಾಯಗೊಂಡ ಪರಶುರಾಮ ಮೃತರಾಗಿದ್ದಾರೆ.

 

ಹತ್ಯೆ ಬಳಿಕ ತಮ್ಮದೇ ಹೊಲದಲ್ಲಿನ ಕೊಳವೆ ಬಾವಿಯತ್ತ ದೇಹ ಸಾಗಿಸಿದ್ದಾನೆ. ದೇಹ ಕೊಳವೆ ಬಾವಿಗೆ ಇಳಿಯದೆ ಇದ್ದಾಗ ತಂದೆಯ ದೇಹವನ್ನು ಕೊಡಲಿಯಲ್ಲಿ ಕೊಚ್ಚಿ 30 ಕ್ಕೂ ಹೆಚ್ಚು ತುಂಡು ತುಂಡು ಮಾಡಿ ಮಗ ಕೊಳವೆ ಬಾವಿಗೆ ಹಾಕಿದ್ದಾನೆ.
ಹೊಳಿದರೆ ಸಿಕ್ಕಿ ಬೀಳಬಹುದು ಎಂದು ಕೊಳವೆ ಬಾವಿಯಲ್ಲಿ ತುರುಕಿದ್ದಾನೆ.

ಪರುಶರಾಮ ಪತ್ನಿ, ಪತಿ ಕಾಣೆಯಾದ ಬಗ್ಗೆ ದೂರು ನೀಡಿದ ನಂತರ ಮಗನನ್ನು ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಸಿಪಿಐ ಅಯ್ಯನಗೌಡ ಪಾಟೀಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!