March 20, 2026

ಬೆಳ್ತಂಗಡಿ: ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಪೊಲೀಸರಿಂದ ತನಿಖೆ

0
IMG-20221213-WA0019.jpg

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಲ್ತಾಜೆ ಸೊರಕ್ಯ ಎನ್ನುವಲ್ಲಿ ಭಾಗಶಃ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹವೊಂದು ಡಿ. 12ರಂದು ಪತ್ತೆಯಾಗಿದೆ.

ಕೇಲ್ತಜೆಯಿಂದ ಸುರ್ಯ ರಸ್ತೆ ಸಾಗುವ 1 ಕಿ.ಮೀ. ದೂರದಲ್ಲಿರುವ ರಬ್ಬರ್‌ ತೋಟದ ಅಂಚಿನಲ್ಲಿರುವ ಕಣಿಯೊಂದರಲ್ಲಿ ಯಾವುದೇ ಗುರುತು ಸಿಗದ ಸ್ಥಿತಿಯಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿದೆ.

ಮಾಲಕರು ಮೇವಿಗಾಗಿ ದನ ಕಟ್ಟಲು ಕಾಡಿಗೆ ತೆರಳುವ ವೇಳೆ ದುರ್ನಾತ ಬೀರುವುದನ್ನು ಕಂಡು ಪರಿಶೀಲಿಸಿದಾಗ, ಕಣಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಟ್ಟ ದೇಹದ ಮೇಲೆ ಕಟ್ಟಿಗೆ ರಾಶಿ ಹಾಕಿ ಮುಚ್ಚಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದಾಗ ಸುಮಾರು 10 ದಿನಗಳ ಹಿಂದೆ ಕೃತ್ಯ ನಡೆದಿರುವ ಸಾಧ್ಯತೆ ಕಂಡುಬಂದಿದ್ದು, ಸ್ಥಳದಲ್ಲಿ ಕಾಲುಂಗುರ ಪತ್ತೆಯಾಗಿದೆ. ಈ ಆಧಾರದಲ್ಲಿ ಮಹಿಳೆ ಮೃತ ದೇಹವಿರಬಹುದು ಎಂದು ಸಂಶಯಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಉದ್ದೇಶಿತ ಕೊಲೆಯಂತೆ ಕಂಡುಬಂದಿದ್ದು, ಪೊಲೀಸರ್ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!