August 14, 2026

ತಮಿಳುನಾಡಿನಲ್ಲಿ ಕಾಡಾನೆಗೆ ಕಬ್ಬು ನೀಡಿದ ಲಾರಿ ಚಾಲಕನಿಗೆ 75 ಸಾವಿರ ರೂ. ದಂಡ!

0
IMG-20221206-WA0041.jpg

ತಮಿಳುನಾಡು: ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ತೆರಳುತ್ತಿದ್ದ ಲಾರಿಯ ಚಾಲಕ ಕಾಡಾನೆಗೆ ಕಬ್ಬು ನೀಡಿರುವುದರಿಂದ ತಮಿಳುನಾಡು ಅರಣ್ಯ ಇಲಾಖೆ 75 ಸಾವಿರ ರೂ. ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.

ಸತ್ಯಮಂಗಲ ತಾಲೂಕಿನ ಹಾಸನೂರು ಚೆಕ್‌ ಪೋಸ್ಟ್‌ ಸಮೀಪ ಲಾರಿ ಚಾಲಕ ನಂಜನಗೂಡು ತಾಲೂಕಿನ ಸಿದ್ದರಾಜು ಎಂಬಾತ ಕಾಡಾನೆಗೆ ಕಬ್ಬು ನೀಡಿದ್ದನ್ನು ಗಸ್ತಿನಲ್ಲಿದ್ದ ತಮಿಳುನಾಡು ಅರಣ್ಯ ಸಿಬ್ಬಂದಿ ಗಮನಿಸಿದ್ದು, ಬಳಿಕ ಮೇಲಧಿಕಾರಿಗಳ ಆದೇಶದಂತೆ ಚಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, 75 ಸಾವಿರ ರೂ. ದಂಡ ವಿಧಿಸಿದ್ದಾರೆ.

ಇನ್ನು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರ ನೀಡುವುದು ನಿಷಿದ್ಧವಾಗಿದ್ದು, ಮನುಷ್ಯರು ನೀಡುವ ಆಹಾರಗಳಿಂದ ವನ್ಯಜೀವಿಗಳ ಸಹಜ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಸೋಂಕು ತಗುಲಿ, ವನ್ಯಜೀವಿಗಳಿಗೆಲ್ಲ ಹರಡಬಹುದೆಂಬ ಕಾರಣದಿಂದ ಆಹಾರ ನೀಡುವಿಕೆಯನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!