March 20, 2026

ಕಾಸರಗೋಡು: ನಿಗೂಢ ರೀತಿಯಲ್ಲಿ ಯುವಕನ ಶವ ಪತ್ತೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ: ವ್ಯವಸ್ಥಿತ ಕೊಲೆ ಸಾಬೀತು

0
image_editor_output_image1718433349-1670343742125

ಕಾಸರಗೋಡು:  ತೃಕ್ಕರಿಪುರ ಮಟ್ಟಮ್ಮಲ್‌‌ನ ಎಂ.ಪ್ರಿಯೇಶ್ (32) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತೃಕ್ಕರಿಪುರ ಪಾರಪ್ಪಾಡ್ ನ ಮುಹಮ್ಮದ್ ಶಬಾಸ್ (22) ಮತ್ತು ಮುಹಮ್ಮದ್ ರಹನಾಸ್ (23) ಬಂಧಿತರು.

ಕೃತ್ಯದಲ್ಲಿ ನೆರವಾಗಿ ಶಾಮೀಲಾಗಿದ್ದ ಸಫ್ವಾನ್ (25) ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ.

ತಂಡವೊಂದು ಮೊಬೈಲ್ ಗೆ ಕರೆ ಮಾಡಿ ಪ್ರಿಯೇಶ್ ನನ್ನು ಕರೆಸಿದ್ದು, ಬೈಕ್ ನಲ್ಲಿ ತೆರಳಿದ್ದ ಪ್ರಿಯೇಶ್ ಮರಳಿ ಬಂದಿರಲಿಲ್ಲ. ಈ ನಡುವೆ ಸೋಮವಾರ ಬೆಳಿಗ್ಗೆ ಮನೆ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಮೀಪ ಬೈಕ್ ಪತ್ತೆಯಾಗಿತ್ತು. ತಂಡವು ಅಪಹರಿಸಿ ಥಳಿಸಿ ಕೊಲೆಗೈದಿದ್ದು ಬಳಿಕ ಮೃತದೇಹವನ್ನು ತಂದು ಮನೆ ಬಳಿ ಎಸೆದು ಪರಾರಿಯಾಗಿದ್ದರು. ಮರದ ತುಂಡಿನಿಂದ ತಂಡವು ಥಳಿಸಿದ್ದು, ಮೃತಪಟ್ಟಿರುವುದಾಗಿ ಖಚಿತ ಗೊಂಡಿದ್ದರಿಂದ ಪ್ರಿಯೇಶ್ ನ ಬೈಕ್ ನಲ್ಲೆ ಮೃತದೇಹ ತಂದು ಎಸೆದು ತೆರಳಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ .

ನಾಪತ್ತೆಯಾಗಿದ್ದ ಪ್ರಿಯೇಶ್ ನ ಮೊಬೈಲ್ ಫೋನ್ ಶಹಬಾಸ್ ನ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಿಯೇಶ್ ಸಮೀಪದ ಮನೆಯೊಂದರ ಬಳಿ ಸಂಶಯಾಸ್ಪದ ವಾಗಿ ಕಂಡು ಬಂದಿದ್ದನೆನ್ನಲಾಗಿದ್ದು, ಇದಕ್ಕಾಗಿ ಪ್ರಶ್ನಿಸಲು ಕರೆದೊಯ್ದು ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಹಬಾಸ್ ಬೆಂಗಳೂರಿನ ಹೋಟೆಲೊಂದರಲ್ಲಿ ನೌಕರನಾಗಿದ್ದನು. ರಹನಾಸ್ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದನು. ಕೊಲೆ ಗೀಡಾದ ಪ್ರಿಯೇಶ್ ಖಾಸಗಿ ಕಂಪೆನಿಯೊಂದರ ಚಾಲಕರಾಗಿದ್ದರು.

ಮೃತಪಟ್ಟ ಪ್ರಿಯಸ್

Leave a Reply

Your email address will not be published. Required fields are marked *

error: Content is protected !!