March 20, 2026

ಮಂಗಳೂರಿನ ಕಾಲೇಜ್ ವಿದ್ಯಾರ್ಥಿನಿ ರೈಲು ಬಡಿದು ಕಾಸರಗೋಡಿನಲ್ಲಿ ಮೃತ್ಯು

0
IMG-20221206-WA0039.jpg

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವಳು ರೈಲು ಬಡಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಚೌಕಿ ಕಾವುಗೋಳಿ ಕಡಪ್ಪುರದ ಸುರೇಂದ್ರನ್ ರವರ ಪುತ್ರಿ ಅಂಜನಾ ಎಸ್ (22) ಮೃತಪಟ್ಟವರು.

ಮಂಗಳೂರು ಸೈ೦ಟ್ ಅಲೋಶಿಯಸ್ ಕಾಲೇಜಿನ ಎಂ ಎಸ್ಸಿ ಬಯೋ ಕೆಮಿಸ್ಟ್ರಿ ವಿದ್ಯಾರ್ಥಿನಿಯಾಗಿದ್ದಳು. ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಅಂಜನಾ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಮನೆಯ ಅಲ್ಪ ದೂರದ ರೈಲು ಹಳಿ ಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈಕೆಯ ಮೊಬೈಲ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಹಳಿ ಪಕ್ಕದಲ್ಲಿ ಪತ್ತೆಯಾಗಿದೆ. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

Leave a Reply

Your email address will not be published. Required fields are marked *

error: Content is protected !!