ತನ್ನ ಸ್ನೇಹಿತರಿಗೆ ಊಟಕ್ಕೆ ಚಿಕನ್ ನೀಡದ್ದಕ್ಕೆ ಮದುವೆಯನ್ನೇ ರದ್ದುಗೊಳಿಸಿದ ವರ
ಹೈದರಾಬಾದ್: ವಧುವಿನ ಮನೆಯವರು ಸ್ನೇಹಿತರಿಗೆ ಊಟಕ್ಕೆ ಚಿಕನ್ ನೀಡದ್ದಕ್ಕೆ ವರನೊಬ್ಬ ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್‍ನ ಜೀಡಿಮೆಟ್ಲಾ ಉಪ ಪ್ರದೇಶವಾದ ಶಹಪುರ್ ನಗರದಲ್ಲಿ ಈ ಘಟನೆ ನಡೆದಿದೆ. ತೆಲಂಗಾಣಕ್ಕೆ ಸೇರಿದ ವರನಿಗೆ ಬಿಹಾರ ಮೂಲದ ವಧುವಿನ ಜೊತೆ ಮದುವೆ ನಿಶ್ಚಯವಾಗಿತ್ತು. ವರನ ಕಡೆಯವರು ಮದುವೆಯ ಅಡುಗೆ ಜವಾಬ್ದಾರಿಯನ್ನು ವಧುವಿನ ಕಡೆಯವರಿಗೆ ವಹಿಸಿದ್ದರು. ಆದರೆ ವಧುವಿನ ಮನೆಯವರು ಮನೆ ಕಟ್ಟುನಿಟ್ಟಾದ ಸಸ್ಯಹಾರಿಗಳಾಗಿದ್ದರು.
ವಿವಾಹಕ್ಕೂ ಮೊದಲು ರಿಸೆಪ್ಶನ್ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ವಧುವಿನ ಕಡೆಯವರು ಸಸ್ಯಹಾರಿಗಳಾಗಿದ್ದರಿಂದ ಅವರು ಊಟಕ್ಕೆ ವಿಶೇಷವಾಗಿ ಸಸ್ಯಹಾರಿಯ ತಿಂಡಿಗಳನ್ನೆ ಮಾಡಿದ್ದರು. ಯಾವುದೇ ಬಗೆಯ ನಾನ್‍ವೆಜ್ ತಿಂಡಿಗಳನ್ನು ಮಾಡಿರಲಿಲ್ಲ.
ರಿಸೆಪ್ಶನ್ ಮುಗಿಯುತ್ತಿದ್ದಂತೆ ವರನ ಸ್ನೇಹಿತರು ಊಟಕ್ಕೆಂದು ಬಂದರು. ಈ ವೇಳೆ ನಾನ್ ವೆಜ್ ವ್ಯವಸ್ಥೆ ಮಾಡದಿರುವುದನ್ನು ಗಮನಿಸಿ ಆಯೋಜಕರೊಂದಿಗೆ ಜಗಳ ಮಾಡಿದ್ದಾರೆ. ಈ ವಿಷಯ ವಧುವಿನ ಕಡೆಯವರಿಗೂ ತಲುಪಿದೆ. ಈ ವೇಳೆ ವಧುವಿನ ಕಡೆಯವರಿಗೂ ವರನ ಸ್ನೇಹಿತರಿಗೂ ಜಗಳವಾಗಿದೆ. ಇದರಿಂದಾಗಿ ವರನ ಸ್ನೇಹಿತರೂ ಕೋಪಗೊಂಡು ಊಟವನ್ನು ಮಾಡದೇ ಅಲ್ಲಿಂದ ಹಾಗೇ ಹೊರಟಿದ್ದಾರೆ.