August 14, 2026

ಪೊಲೀಸ್ ಜೀಪ್‍ನಿಂದ ಬಿದ್ದು ಆರೋಪಿ ಸಾವು: ಮೂವರು ಪೊಲೀಸರ  ವಿರುದ್ಧ ಎಫ್‍ಐಆರ್ ದಾಖಲು

0
image_editor_output_image-12188289-1669790040743.jpg

ಚಾಮರಾಜನಗರ: ಪೊಲೀಸ್ ಜೀಪ್‍ನಿಂದ ಬಿದ್ದು ಆರೋಪಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಯಳಂದೂರು ವೃತ್ತದ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಎಸ್‍ಐ ಮಾದೇಗೌಡ, ಪೊಲೀಸ್ ಕಾನ್ಸ್‌ಟೇಬಲ್ ಸೋಮಣ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಮಗನನ್ನು ಹಿಂಸಿಸಿ ಕೊಂದಿದ್ದಾರೆಂದು ಮೃತ ನಿಂಗರಾಜು ತಾಯಿ ಮಹದೇವಮ್ಮ ದೂರು ಕೊಟ್ಟಿದ್ದಾರೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಘಟನೆಯೇನು?: ಅಪ್ರಾಪ್ತ ಬಾಲಕಿ ಅಪಹರಣ ಕೇಸ್‍ಗೆ ಸಂಬಂಧಿಸಿದಂತೆ ನಿಂಗರಾಜು ವಿರುದ್ಧ ಮಾಂಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗಾಗಿ ಪೊಲೀಸರು ನಿಂಗರಾಜುನನ್ನು ಠಾಣೆಗೆ ಕರೆದುಕೊಂಡು ಬರುತ್ತಿದ್ದರು.

ಈ ವೇಳೆ ಚಲಿಸುತ್ತಿದ್ದ ಜೀಪ್‍ನಿಂದ ನಿಂಗರಾಜು ನೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜೀಪ್‍ನಿಂದ ನೆಗೆದ ಬಳಿಕ ಗಂಭೀರ ಗಾಯಗಳಾಗಿದ್ದರಿಂದ ಯಳಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!