ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ
ನೆಲಮಂಗಲ: ಪತಿಯೊಬ್ಬ ತನ್ನ ಪತ್ನಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಶೃತಿ (24) ಕೊಲೆಯಾದ ಗೃಹಿಣಿ. ಈತ ಮದುವೆಯಾಗಿ ಒಂದೂವರೆ ವರ್ಷದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.
ತರಬನಹಳ್ಳಿ ನಿವಾಸಿಯಗಿರುವ ಶೃತಿಯನ್ನು ಪತಿ ಕೃಷ್ಣಮೂರ್ತಿ ಕೊಲೆಗೈದಿದ್ದಾನೆ. ಬಳಿಕ ಭೂಸಂದ್ರ ಗ್ರಾಮದ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಾನೆ.
ಸದ್ಯ ಮೃತ ಶೃತಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿದ್ದಾರೆ. ಮೃತ ಶೃತಿ ದೇಹದ ತುಂಬಾ ಗಂಭೀರವಾದ ಗಾಯದ ಗುರುತುಗಳು ಪತ್ತೆಯಾಗಿವೆ.




