March 20, 2026

ಕುಂದಾಪುರ: ರೈಲ್ವೇ ಸೇತುವೆ ಬಳಿ ರಸ್ತೆ ಅಪಘಾತ, ಬೈಕ್ ಸವಾರ ಕನ್ಯಾನದ ನಿವಾಸಿ ಮೃತ್ಯು

0
image_editor_output_image-982497392-1669097897544.jpg

ಕುಂದಾಪುರ: ಕಾಳಾವರ ಗ್ರಾಮದ ರೈಲ್ವೇ ಸೇತುವೆ ಬಳಿ ರಸ್ತೆಯಲ್ಲಿ ಹಸುವಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ಬೈಕ್ ಸವಾರನನ್ನು ಕನ್ಯಾನದ ಸಮೀಪ ಬೇಡಗುಡ್ಡೆ ನಿವಾಸಿ ಶಿವರಾಮ್ ಕುಲಾಲ್ (35) ಎಂದು ಗುರುತಿಸಲಾಗಿದೆ.

ಶಿವರಾಮ ಅವರು ಬೈಕಿನಲ್ಲಿ ಗುಡ್ಡೆಯಂಗಡಿಯ ಮಹೇಶ (35) ರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸಾಲಿಗ್ರಾಮ
ಕಡೆಯಿಂದ ಕೋಟೇಶ್ವರ ಮುಖೇನ ಬಿದ್ಕಲ್‌ಕಟ್ಟೆ ಕಡೆಗೆ ಬರುತ್ತಿದ್ದರು. ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದು ಬೈಕ್ ಹಾಗೂ ಇಬ್ಬರು ರಸ್ತೆಗೆ ಬಿದ್ದಿದ್ದರು.

ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಪ್ರಜ್ಞೆ ಹೋದವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ, ಮಹೇಶ ಅವರುಮೃತಪಟ್ಟಿರುವುದಾಗಿ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!