ಶ್ರದ್ದಾಳನ್ನು ಡ್ರಗ್ಸ್ ಮತ್ತಿನಲ್ಲಿ ತುಂಡಾಗಿ ಕತ್ತರಿಸಿದ್ದೆ – ಪೊಲೀಸ್ ತನಿಖೆ ವೇಳೆ ಸತ್ಯ ಬಾಯ್ಬಿಟ್ಟ ಅಫ್ತಾಬ್
ನವದೆಹಲಿ: ಶ್ರದ್ದಾ ವಾಲ್ಕರ್ ಪ್ರಕರಣದ ಆರೋಪಿ ಅಫ್ತಾಬ್ ವಿಚಾರಣೆ ವೇಳೆ ಒಂದೊಂದೇ ವಿಷಯಗಳು ಬಹಿರಂಗಗೊಳಿಸುತ್ತಿದ್ದು, ಇದೀಗ ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾಳ ದೇಹವನ್ನು ತುಂಡು, ತುಂಡು ಮಾಡಿರುವುದಾಗಿ ತಿಳಿಸಿದ್ದಾನೆ.
ನಾನು ಮಾರಿಜುವಾನಾ ಸೇದುತ್ತಿದ್ದು, ಈ ಬಗ್ಗೆ ಶ್ರದ್ದಾ ತಗಾದೆ ತೆಗೆಯುತ್ತಿದ್ದಳು ಆಕೆಯನ್ನು ಕೊಂದ ದಿನದಂದು ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿಕೊಂಡಿರುವುದಾಗಿ ಪೊಲೀಸರ ತನಿಖೆಯ ಸಂದರ್ಭದಲ್ಲಿ ತಿಳಿಸಿದ್ದಾನೆ.
ಇನ್ನು ಮುಂಬೈನಿಂದ ದೆಹಲಿಗೆ ತಮ್ಮ ಲಗೇಜ್ ಅನ್ನು ಯಾರು ತರುತ್ತಾರೆ ಎಂಬ ವಿಚಾರದಲ್ಲಿ ಇಬ್ಬರ ನಡುವೆಯೂ ಜಗಳ ನಡೆದಿತ್ತು. ಹೀಗೆ ಜಗಳ ವಿಕೋಪಕ್ಕೆ ಹೋದಾಗ ಅಫ್ತಾಬ್ ಫ್ಲ್ಯಾಟ್ ನಿಂದ ಹೊರಬಂದು ಮಾರಿಜುವಾನಾ ಸೇದಿದ ಮತ್ತಿನಲ್ಲಿಯೇ ಅವನನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.





