August 12, 2026

ಕಾಂಗ್ರೆಸ್‌ನಲ್ಲಿದ್ದರೆ ನೀವು ಮುಖ್ಯಮಂತ್ರಿ ಆಗಲ್ಲ ಬಿಜೆಪಿಗೆ ಬನ್ನಿ – ಡಿಕೆಶಿಗೆ ಮುನಿರತ್ನ ಆಹ್ವಾನ

0
IMG-20221107-WA0031.jpg

ಬೆಂಗಳೂರು: ಕಾಂಗ್ರೆಸ್‌‌ನಲ್ಲಿದ್ದರೆ ನೀವು ಮುಖ್ಯಮಂತ್ರಿ ಆಗಲ್ಲ, ನೀವು ಬಿಜೆಪಿಗೆ ಬನ್ನಿ ಪ್ರಧಾನ ಮಂತ್ರಿಗಳಿಗೆ ಹೇಳಿ ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ ಎಂದು ಸಚಿವ ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಮುನಿರತ್ನ, ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವರಿಗೆಗೆ ಪ್ರೀತಿಯಿದ್ದು, ಹಾಗಾಗಿ ಆಹ್ವಾನ ನೀಡುತ್ತಿದ್ದಾರೆ. ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಹೀಗಾಗಿ ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ ಎಂದರು.

ಇನ್ನು ಡಿ.ಕೆ ಶಿವಕುಮಾರ್‌ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ ಎಂದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!