August 13, 2026

‘ಹತ್ತು ಲಕ್ಷ ಉದ್ಯೋಗ ನೇಮಕಾತಿಗಾಗಿ ಮೋದಿ ಆಡಳಿತವು ಎಂಟು ವರ್ಷ ತೆಗೆದುಕೊಂಡಿದೆ ‘- ಖರ್ಗೆ ವಾಗ್ದಾಳಿ

0
Mallikarjun-Kharge-1598279594.png

ನವದೆಹಲಿ: ದೇಶದಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಯುವಕರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಪ್ರಧಾನಿ ಕೆಲವೇ ಸಾವಿರ ನೇಮಕಾತಿ ಪತ್ರ ಹಸ್ತಾಂತರಿಸಿ ಸುಮ್ಮನಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕೇರುವ ಸಂದರ್ಭದಲ್ಲಿ ಪ್ರತಿ ವರ್ಷ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿ, ಕೇವಲ ಕೇಂದ್ರ ಸರ್ಕಾರಿ ಹುದ್ದೆಗಳಿಗೆ 10 ಲಕ್ಷ ನೇಮಕಾತಿ ನಡೆಸಲು ಎಂಟು ವರ್ಷಗಳನ್ನು ತೆಗೆದುಕೊಂಡಿದೆ ಎಂದರು.

ಗ್ರಾಮೀಣ ಭಾರತದಲ್ಲಿ ನಿರುದ್ಯೋಗವೇ ದೊಡ್ಡ ಸವಾಲಾಗಿದೆ. ವರ್ಷಗಟ್ಟಲೆ ಕಾದರೂ ಸರ್ಕಾರಿ ಉದ್ಯೋಗ ಸಿಗದ ಪರಿಸ್ಥಿತಿ ದೇಶದ ಯುವಕರಲ್ಲಿದೆ. ಇಚ್ಚಾಶಕ್ತಿಯ ಕೊರತೆ ಮತ್ತು ಬಿಜೆಪಿಯ ಸುಳ್ಳು ಭರವಸೆಗಳೇ ಇದಕ್ಕೆಲ್ಲಾ ಕಾರಣವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!