ಪುತ್ತೂರು: ಚರಂಡಿಗೆ ಕಾರು ಪಲ್ಟಿ – ಅಪಾಯದಿಂದ ದಂಪತಿ ಪಾರು
ಪುತ್ತೂರು: ಕುಂಬ್ರ ಸಮೀಪದ ಕೊಳ್ಳಾಜೆಯಲ್ಲಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ದಂಪತಿ ಅದೃಷ್ಟವ ಶಾತ್ ಪಾರಾದ ಘಟನೆ ನ.5ರಂದು ನಡೆದಿದೆ.
ಮಾರುತಿ ಕಾರು ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದಾಗ ಕೊಳ್ಳಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗೆ ಪಲ್ಟಿಯಾಗಿದೆ.
ಕಾರು ಚಲಾಯಿಸುತ್ತಿದ್ದ ಉಪ್ಪಿನಂಗಡಿಯ ಗೋಪಾಲಕೃಷ್ಣ ಭಟ್ ಅವರ ಪತ್ನಿ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.





