February 4, 2026

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ದೂರು

0
image_editor_output_image788636640-1667633551647.jpg

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಹಿಂದೂ ಭಾವನೆಗಳಿಗೆ ಧಕ್ಕೆ ವಿಚಾರವಾಗಿ ದೇವಿ ಶ್ರೀ ಪ್ರಸಾದ್ ಮೇಲೆ ದೂರು ಸಲ್ಲಿಕೆ ಆಗುತ್ತಿದ್ದಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ತನಿಖೆಯನ್ನೂ ಶುರು ಮಾಡಿದ್ದಾರೆ. ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ ಹಾಡಿನಲ್ಲಿ ‘ಹರೇ ಕೃಷ್ಣ ಹರೇ ರಾಮ’ ಎಂದು ಜಪಿಸಲಾಗುತ್ತಿದೆ. ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಈ ಪವಿತ್ರ ಸಾಲುಗಳನ್ನು ಹೇಳಲಾಗುತ್ತದೆ. ಇಂತಹ ಸಾಲುಗಳನ್ನು ಹೇಳುವಾಗ ನೃತ್ಯ ಮಾಡುವವರು ಅಶ್ಲೀಲವಾಗಿ ಕಂಡಿದ್ದಾರೆ ಎನ್ನುವುದು ದೂರು ನೀಡಿದವರು

Leave a Reply

Your email address will not be published. Required fields are marked *

error: Content is protected !!