ಕೆಜಿಎಫ್- 2 ಚಿತ್ರದ ಹಾಡು ದುರ್ಬಳಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಎಫ್ಐಆರ್
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಜೋಡೋ ಯಾತ್ರೆಯಲ್ಲಿ ಕೆಜಿಎಫ್- 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ದುರ್ಬಳಕೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಹುಲ್ ಗಾಂಧಿ, ಸಂಸದ ಜಯರಾಂ ರಮೇಶ್, ಸುಪ್ರೀಯಾ ಶ್ರೀನಾಥೆ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಮ್ ಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ.
ಭಾರತ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರದ ಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್ ಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆಯದೆ ಬಳಸಲಾಗಿತ್ತು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು.




