March 22, 2026

ಭೀಕರ ರಸ್ತೆ ಅಪಘಾತ – ಐದು ಮಂದಿ ಕೂಲಿ ಕಾರ್ಮಿಕರು ಮೃತ್ಯು

0
road-accident-shutterstock.jpg

ಹುಮನಾಬಾದ್ : ಭೀಕರ ರಸ್ತೆ ಅಪಘಾತದಲ್ಲಿ ಐದು ಜನ ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಮಳಖೇಡಾ ಗ್ರಾಮದ ಬಳಿ ನಡೆದಿದೆ.

ಮೃತಪಟ್ಟ ಎಲ್ಲ ಕಾರ್ಮಿಕರು ಹುಮನಾಬಾದ ತಾಲೂಕಿನ ಉಡಮನಳ್ಳಿ ಗ್ರಾಮದವರಾಗಿದ್ದು, ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಮೃತ (40), ಗುಂಡಮ್ಮ ನರಸಿಂಗ್ (60), ಜಗದೇವಿ ಪ್ರಭು (34) ಮತ್ತು ರುಕ್ಮೀಣಿ ಅಮೃತ (60) ಎಂದು ಗುರುತಿಸಲಾಗಿದ್ದು ಆಟೋ ಚಾಲಕ ಜಗನ್ನಾಥ ಸಿದ್ದಪ್ಪ (40) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತೆಲಂಗಾಣ ಗಡಿ ಗ್ರಾಮದಲ್ಲಿ ಸೊಯಾಬಿನ್ ರಾಶಿ ಮುಗಿಸಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೆಮಳಖೇಡಾ- ಉಡುಮನಳ್ಳಿ ರಸ್ತೆಯಲ್ಲಿ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಐಶ್ಚರ್ ವಾಹನ ಢಿಕ್ಕಿ ಹೊಡೆದಿದೆ.

ಘಟನಾ ಸ್ಥಳಕ್ಕೆ ಬೆಮಳಖೇಡಾ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!