March 22, 2026

ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಬಂತು ವೋಲ್ವೋ ಬಸ್: ಪ್ರಯಾಣ ದರ ಎಷ್ಟು ಗೊತ್ತೆ!

0
IMG-20221104-WA0035.jpg

ಮಂಗಳೂರು: ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಿರುವ ವೋಲ್ವೋ ಬಸ್‌ಗಳ ಮಧ್ಯಂತರ ಸ್ಥಳಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ (20 ರೂ.), ಬಿಜೈ ಕೆಎಸ್ಸಾರ್ಟಿಸಿ (25 ರೂ), ಕುಂಟಿಕಾನ (30 ರೂ), ಕೊಂಚಾಡಿ (35 ರೂ), ಕಾವೂರು (40 ರೂ), ಮರವೂರು (60 ರೂ), ಬಜ್ಪೆ ಕರಂಬಾರಿಗೆ 70 ರೂ. ನಿಗದಿ ಮಾಡಲಾಗಿದೆ. ಜ್ಯೋತಿಯಿಂದ ಬಿಜೈ ಕೆಎಸ್ಸಾರ್ಟಿಸಿ (20 ರೂ), ಕುಂಟಿಕಾನ (25 ರೂ), ಕೊಂಚಾಡಿ (30 ರೂ), ಕಾವೂರು (35 ರೂ), ಮರವೂರು (50 ರೂ), ಕರಂಬಾರಿಗೆ 60 ರೂ. ದರ ನಿಗದಿ ಮಾಡಲಾಗಿದೆ.‌

ಬಿಜೈ ಕೆಎಸ್ಸಾರ್ಟಿಸಿಯಿಂದ ಕುಂಟಿಕಾನ (20 ರೂ.), ಕೊಂಚಾಡಿ (25 ರೂ.), ಕಾವೂರು (30 ರೂ.), ಮರವೂರು (40 ರೂ.), ಕರಂಬಾರಿಗೆ 50 ರೂ. ನಿಗದಿಪಡಿಸಲಾಗಿದೆ. ಕುಂಟಿಕಾನದಿಂದ ಕೊಂಚಾಡಿ (20 ರೂ), ಕಾವೂರು (25 ರೂ), ಮರವೂರು (30 ರೂ), ಕರಂಬಾರಿಗೆ 40 ರೂ. ಇರಲಿದೆ.

ಕೊಂಚಾಡಿಯಿಂದ ಕಾವೂರು 20 ರೂ., ಮರವೂರಿಗೆ 30 ರೂ., ಕರಂಬಾರಿಗೆ 40 ರೂ., ಕಾವೂರಿನಿಂದ ಮರವೂರಿಗೆ 20 ರೂ., ಕರಂಬಾರಿಗೆ 30 ರೂ. ಇರಲಿದೆ. ನ.1ರಂದು ಮೂರು ವೋಲ್ವೋ ಬಸ್ ಗಳ ಪ್ರಯಾಣಕ್ಕೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು. ‌

Leave a Reply

Your email address will not be published. Required fields are marked *

error: Content is protected !!