ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ: ಶಾಸಕ ಎಂ.ಪಿ ರೇಣುಕಾಚಾರ್ಯ
ದಾವಣಗೆರೆ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ. ಕಿಡ್ನಾಪ್ ಮಾಡಿದವರು ನನ್ನ ಮಗನನ್ನು ಬಿಟ್ಟುಬಿಡಲಿ ನಾನು ದೂರು ನೀಡುವುದಿಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಗ ಚಂದ್ರು ಕಾಣೆಯಾಗಿ 5 ದಿನ ಆಯ್ತು. ಭಾನುವಾರ ಬೆಳಗ್ಗೆ ಎಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಆತನಿಗೆ ಇಲ್ಲ. ದೊಡ್ಡಪ್ಪನ ಪರವಾಗಿ, ಕ್ಷೇತ್ರದ ಪರವಾಗಿ ಓಡಾಟ ನಡೆಸಿದ್ದ ಎಂದು ಕಣ್ಣೀರಿಟ್ಟರು.




