February 3, 2026

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ: ಪಾದಚಾರಿ ಮಹಿಳೆ ಸೇರಿ ಐವರು ಗಾಯ

0
WhatsApp-Image-2022-11-03-at-3.06.09-PM-1-1068x801.jpeg

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಿನ್ನಿಗೋಳಿ – ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಂಸಿಸಿ ಬ್ಯಾಂಕ್ ಬಳಿ ನಡೆದಿದೆ.

ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ (50) ಗಂಭೀರ ಗಾಯಗೊಂಡ ಮಹಿಳೆ. ಉಳಿದಂತೆ ಕಾರಿನಲ್ಲಿದ್ದ ಚಾಲಕ ತೋಡಾರ್ ಗಳಾದ ನಿವಾಸಿ ಚಾಲಕ ಕೆ ಹೆಚ್ ಅಬ್ದುಲ್ ಖಾದರ್ (65), ರಿದಾ (16), ರಶ್ಮಿ (18), ಕೌಸರ್ (46), ಎಂದು ಗುರುತಿಸಲಾಗಿದ್ದು, ಕಿನ್ನಿಗೊಳಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಸುರತ್ಕಲ್ ಕೃಷ್ಣಾಪುರದಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಿದ್ದ ಕಾರು ಕಿನ್ನಿಗೋಳಿ ರಾಜ್ಯ ಹೆದ್ದಾರಿ ಎಂಸಿಸಿ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ತೀರಾ ಬಲ ಬದಿಗೆ ಚಲಿಸಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಮಹಿಳೆ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವಾಗ ಸ್ಥಳೀಯರಾದ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

Leave a Reply

Your email address will not be published. Required fields are marked *

error: Content is protected !!