February 3, 2026

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ, ವಿದ್ಯಾರ್ಥಿಯ ಬಂಧನ

0
image_editor_output_image-1595456213-1667468889168.jpg

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೋರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಞ೦ಗಾಡ್ ಅಲಾಮಿಪಲ್ಲಿಯ ಅಬ್ದುಲ್ ಶುಹೈಬ್ (21) ಬಂಧಿತ ವಿದ್ಯಾರ್ಥಿ. ಪಡನ್ನಕಾಡಿನ ಸಿಕೆ ನಾಯರ್ ಕಲಾ ಕಾಲೇಜಿನ ವಿದ್ಯಾರ್ಥಿನಿ ನಂದನಾ ವಿನೋದ್(20) ಸೋಮವಾರ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಂದನಾ ಜೊತೆ ಪ್ರೀತಿಯ ನಾಟಕವಾಡಿದ್ದ ಆರೋಪಿ ಶುಹೈಬ್, ಆಕೆ ಕಳುಹಿಸಿಕೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವ ಬೆದರಿಕೆಯೊಡ್ಡಿದ್ದರಿಂದ ಬೇಸತ್ತಾ ನಂದನಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರ.

ಸೋಮವಾರ ಸಂಜೆ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ನಂದನಾ ಪತ್ತೆಯಾಗಿದ್ದಳು. ಆತ್ಮಹತ್ಯೆ ಗೈಯ್ಯುವ ಮುನ್ನ ಶುಹೈಬ್ ನಂದನಾಳಿಗೆ ವಿಡಿಯೋ ಕಾಲ್ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ವಿಡಿಯೋ ಕಾಲ್ ನಡುವೆಯೇ ನಂದನಾ ನೇಣಿಗೆ ಶರಣಾಗಿರುವುದಾಗಿ ಸಂಶಯಿಸಲಾಗಿದೆ. ವಿಡಿಯೋ ಕಾಲ್ ನಡುವೆ ನಂದನಾ ಪ್ರತಿಕ್ರಿಯೆ ಲಭಿಸದಿದ್ದುರಿಂದ ಶುಹೈಬ್ ನು ನಂದನಾಳ ಸ್ನೇಹಿತೆಗೆ ಕರೆ ಮಾಡಿದ್ದು, ಆಕೆ ನೀಡಿದ ಮಾಹಿತಿಯಂತೆ ನಂದನಾಳ ಮನೆಯವರು ಕೊಠಡಿಗೆ ತೆರಳಿದಾಗ ನೇಣು ಬಿಗಿದಿರುವುದು ಕಂಡುಬಂದಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ತಲಪಿಸಿದರೂ ಅದಾಗಲೇ ನಂದನಾ ಮೃತಪಟ್ಟಿದ್ದಳು . ಬಳಿಕ ಇಬ್ಬರ ಮೊಬೈಲ್ ಫೋನ್ ನ್ನು ತಪಾಸಣೆ ನಡೆಸಿದಾಗ ಹಲವು ಮಾಹಿತಿಗಳು ಪೊಲೀಸರಿಗೆ ಲಭಿಸಿದೆ.

ಇದರಂತೆ ಆರೋಪಿಯನ್ನುಸೋಮವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ . ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!