November 14, 2024

ಹುಡುಗಿಯರನ್ನು ‘ಐಟಮ್‌’ ಎಂದು ಕರೆಯುವುದು ಅವಹೇಳನಕಾರಿ: ಮುಂಬೈನ ವಿಶೇಷ ಕೋರ್ಟ್‌

0

ಮುಂಬೈ: ಹುಡುಗಿಯರನ್ನು ‘ಐಟಮ್‌’ ಎಂದು ಕರೆಯುವುದು ಅವಹೇಳನಕಾರಿ ಎಂದು ಮುಂಬೈನ ವಿಶೇಷ ಕೋರ್ಟ್‌ ಕಿಡಿಕಾರಿದೆ. ಇದು ಲೈಂಗಿಕ ದುರುದ್ದೇಶದಿಂದ ಆಕೆಯನ್ನು ಗುರಿಯಾಗಿಸಿ ಅಪಮಾನಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

2015ರ ಲೈಂಗಿಕ ದೌರ್ಜನ್ಯ ಪ್ರಕರಣ ಒಂದಕ್ಕೆ ಸಂಬಂಧಿಸಿ ತೀರ್ಪು ನೀಡುವ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಕ್ಕೆ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಆದೇಶವನ್ನು ಅಕ್ಟೋಬರ್‌ 20ರಂದು ನೀಡಲಾಗಿದೆ.

ಆರೋಪಿ ಮೇಲೆ ಸಹಾನುಭೂತಿಯನ್ನು ತೋರಿಸಲು ನಿರಾಕರಿಸಿದ ಕೋರ್ಟ್‌, ಬೀದಿ ಬದಿಯ ‘ರೋಮಿಯೊ’ಗಳಿಗೆ ತಕ್ಕ ಪಾಠ ಕಲಿಸಬೇಕು. ಮುಂದೆ ಇಂತಹ ಅಸಭ್ಯ ವರ್ತನೆ ತೋರದಂತೆ ಎಚ್ಚರಿಕೆಯಾಗಬೇಕು ಎಂದು ನ್ಯಾಯಮೂರ್ತಿ ಎ.ಜೆ. ಅನ್ಸಾರಿ ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಅಡಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!