ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಬಸ್:
ಬೆಂಕಿ ಹೊತ್ತಿಕೊಂಡ 12 ಮಂದಿ ಸಜೀವ ದಹನ
ರಾಜಸ್ಥಾನ: ಬಾರ್ಮರ್-ಜೋಧ್‌ಪುರ ಹೆದ್ದಾರಿಯಲ್ಲಿ ಬುಧವಾರ ಟ್ಯಾಂಕರ್ ಟ್ರೈಲರ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಪ್ರಯಾಣಿಕರೊಬ್ಬರ ಪ್ರಕಾರ, ಬಸ್ ಬೆಳಿಗ್ಗೆ 9:55 ಕ್ಕೆ ಬಲೋತ್ರಾದಿಂದ ಹೊರಟಿತು ಮತ್ತು ರಸ್ತೆಯ ತಪ್ಪು ಬದಿಯಿಂದ ಬಂದ ಟ್ಯಾಂಕರ್ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ಹೊತ್ತಿ ಉರಿದಿದೆ.
ಅಪಘಾತದ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪಚ್ಪದ್ರಾ ಶಾಸಕ ಮದನ್ ಪ್ರಜಾಪತ್, ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಸುಖರಾಮ್ ಬಿಷ್ಣೋಯ್ ಅವರು ಅಪಘಾತ ಸ್ಥಳದಲ್ಲಿ ಉಪಸ್ಥಿತರಿದ್ದರು.
ಅಪಘಾತದ ವೇಳೆ ಬಸ್‌ನಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು. ಇದುವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.





