February 3, 2026

ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ: ಪರಾಜಿತ ಅಭ್ಯರ್ಥಿ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದು ಹೀಗೆ….

0
Screenshot_2022-10-19-15-19-07-84_680d03679600f7af0b4c700c6b270fe7.jpg

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಿದ್ದಂತೆ ಅವರಿಗೆ ಅಭಿನಂದನೆ ಸಲ್ಲಿಸಿದ ಪರಾಜಿತ ಅಭ್ಯರ್ಥಿ ಸಂಸದ ಶಶಿ ತರೂರ್, ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಸಿಗುವುದೆಂದರೆ ಅದು ದೊಡ್ಡ ಜವಾಬ್ದಾರಿ ಮತ್ತು ಗೌರವಾನ್ವಿತ ಹುದ್ದೆ. ಖರ್ಗೆಯವರು ಈ ಹುದ್ದೆ, ಸ್ಥಾನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದುದ್ದಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು, ಸಹೋದ್ಯೋಗಿಗಳಿಂದ ಖರ್ಗೆಯವರಿಗೆ ಸಿಕ್ಕಿರುವ ಬೆಂಬಲ ಅಭೂತಪೂರ್ವವಾದದ್ದು, ಮುಂದೆಯೂ ಅಪಾರ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರ ಸಹಕಾರ, ಬೆಂಬಲದಿಂದ ಪಕ್ಷವನ್ನು ಮುನ್ನಡೆಸುವ ಕಾರ್ಯ ಮಾಡಿಕೊಂಡು ಹೋಗಲಿ ಎಂದು ಆಶಿಸಿದರು.

Leave a Reply

Your email address will not be published. Required fields are marked *

error: Content is protected !!