February 3, 2026

ಅಡುಗೆ ಚೆನ್ನಾಗಿರದ ಕಾರಣಕ್ಕೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ

0
image_editor_output_image-1072407579-1665381615110.jpg

ದಾವಣಗೆರೆ : ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯೇ 70 ವರ್ಷದ ವಯೋವೃದ್ಧ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ದಾವಣಗೆರೆಯ ರಾಮಕೃಷ್ಣ ಹೆಗಡೆ ನಗರದಲ್ಲಿ ನಡೆದಿದೆ.

ಅಖ್ತರ್ ರಜಾ ಸರ್ಕಲ್ ರಿಂಗ್ ರಸ್ತೆಯ ಹೆಗಡೆ ನಗರದ ನಿವಾಸಿ ಶಾಕಿರಾ ಬೀ(70) ಕೊಲೆಯಾದ ವೃದ್ಧೆ. ಪತಿ ಚಮನ್ ಸಾಬ್ (80) ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.

ಶಾಕೀರಾ ಬೀ ಮತ್ತು ಚಮನ್ ಸಾಬ್ ಗೆ ಮಕ್ಕಳಿದ್ದರೂ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಡುಗೆ ಇತರೆ ವಿಚಾರವಾಗಿ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!