ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗುತ್ತಿಯಾ: ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು
ವಿಜಯಪುರ: ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ. ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸ್‌ಟೇಬಲ್ ರಾಜಶೇಖರ ಖಾನಾಪುರ ಅಮಾನತು ಆದ ಕಾನ್ಸ್‌ಟೇಬಲ್.
ಅಮಾನತು ಮಾಡಿ ವಿಜಯಪುರ ಎಸ್‌ಪಿ ಎಚ್.ಡಿ.ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ. ʻಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗುʼ ಎಂದು ಪೇದೆ ರಾಜಶೇಖರ ಪೋಸ್ಟ್ ಮಾಡಿದ್ದ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರಿ ವೈರಲ್ ಆಗಿತ್ತು. ಪೇದೆಯ ಪೋಸ್ಟ್ ವಿರುದ್ಧ ಕುರುಬ ಸಮುದಾಯ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.




