February 3, 2026

ಬಂಟ್ವಾಳ: ಪಾದಚಾರಿಯ ಸಾವು ಪ್ರಕರಣ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image762286355-1665382405030.jpg

ಬಂಟ್ವಾಳ: ಐದು ವರ್ಷಗಳ ಹಿಂದೆ ಪಾದಚಾರಿಯೊಬ್ಬರ ಸಾವಿಗೆ ಕಾರಣವಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಪೆರಂಬದೂರು ಜಿಲ್ಲೆಯ ವೇಪನ್ ತಾಲೂಕಿನ ಪೆರಿಯವಾಡಗರೈ ಮೂಲದ ಸೆಲ್ವರಾಜ್ ಬಂಧಿತ ವ್ಯಕ್ತಿವಾಗಿದ್ದು, ಆತನನ್ನು ಆಂಧ್ರಪ್ರದೇಶದ ಕಡಪದಿಂದ ಬಂಟ್ವಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸೆಲ್ವರಾಜ್ ಟ್ಯಾಂಕರ್ ಚಾಲಕನಾಗಿದ್ದು, 2017ರಲ್ಲಿ ಬಿ.ಸಿ.ರೋಡ್ ಬಳಿಯ ಕೈಕಂಬದಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯನ್ನು ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ. ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ನ್ಯಾಯಾಲಯ ಆರೋಪಿ ಸೆಲ್ವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *

error: Content is protected !!