March 24, 2026

ವಿಟ್ಲ: ಕುದ್ರೋಳಿ ಕ್ಷೇತ್ರದ ದಸರಾ ಉತ್ಸವದ ಬಗ್ಗೆ ಅವಹೇಳನ ಬರಹ:
ಬಿಲ್ಲವ ಸಂಘದಿಂದ ವಿಟ್ಲ ಠಾಣೆಗೆ ದೂರು

0
IMG-20220921-WA0018.jpg

ವಿಟ್ಲ: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ದಸರಾ ಉತ್ಸವವಕ್ಕೆ ಅವಹೇಳನ ಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿಟ್ಲ ಪೋಲೀಸ್ ಠಾಣೆಗೆ ದೂರು ದಾಖಲು.

ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶದಿಂದ ಮತ್ತು ಸಮುದಾಯದ ಧಾರ್ಮಿಕ ಭವನಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ತುಣುಕುಗಳನ್ನು ಹಾಕಿರುವ ಬಗ್ಗೆ ಪದ್ಮನಾಭ ಸಾಮಂತ್ ಎಂಬವರ ಮೇಲೆ ಕಠಿಣ ಕಾನೂನು ಕ್ರಮಗೊಳ್ಳಬೇಕು ಎಂದು ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೊಳ್ಳಾಡು, ಸಾಲೆತ್ತೂರು, ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಅವರು ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ದಸರಾ ಉತ್ಸವವನ್ನು ಅತ್ಯಂತ ವೈಭವ ಮತ್ತು ಧಾರ್ಮಿಕ ಶ್ರದ್ದೆಯಿಂದ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಅಸಂಖ್ಯಾತ ಭಕ್ತಾದಿಗಳು ಸದ್ದಿ ಧಾರ್ಮಿಕ ಕ್ಷೇತ್ರಕ್ಕೆ ಆ ಸಂಧರ್ಭದಲ್ಲಿ ಭೇಟಿ ನೀಡುತ್ತಾರೆ. ಆದರೆ ದಸರಾ ಉತ್ಸವದ ಸಿದ್ಧತೆಗೆ ಭಂಗ ಉಂಟು ಮಾಡುವ ರೀತಿಯಲ್ಲಿ ಮತ್ತು ದಸರಾ ಉತ್ಸವವನ್ನು ಮತ್ತು ಅದರ ಉದ್ದೇಶವನ್ನು ಹಾಳು ಮಾಡುವ ಉದ್ದೇಶದಿಂದ ಪದ್ಮನಾಭ ಸಾಮಂತ ಸರಕಾರದ ವತಿಯಿಂದ ವ್ಯವಸ್ಥೆ ಮಾಡಲಾದ ವಿದ್ಯುತ್‌ ದೀಪಾಲಂಕಾರವನ್ನು ರಾಜಕೀಯ ಪಕ್ಷಕ್ಕೆ ಅಪವಾದ ಹೊರಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ದಸರಾ ಉತ್ಸವಕ್ಕೆ ಕೆಟ್ಟ ಹೆಸರು ಬರಬೇಕೆಂಬ ಉದ್ದೇಶದಿಂದ ಕೆಲವೊಂದು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿರುತ್ತಾನೆ.

ಇದು ಬಿಲ್ಲವ ಸಮಾಜಕ್ಕೆ ಅವಮಾನ ಮಾಡುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿಲ್ಲವರ ನಡುವೆ ಅಪಮಾನಿಸುವ ಮತ್ತು ಪರಸ್ಪರ ಮತಗಳ ನಡುವೆ ಸಂಘರ್ಷಣೆ ಮತ್ತು ದ್ವೇಷ ಉಂಟು ಮಾಡುವ ಉದ್ದೇಶಕ್ಕೆ ಮಾಡಿರುವ ಕೃತ್ಯವಾಗಿದ್ದು, ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ತರಹದ ಧಕ್ಕೆಯಾಗಿರುತ್ತದೆ. ಈತನು ರೂಢಿಗತ ಅಪರಾಧಿಯಾಗಿದ್ದು, ಪರಸ್ಪರ ಸಾರ್ವಜನಿಕ ಶಾಂತಿಯನ್ನು ಮತ್ತು ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದ ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ತುಣುಕುಗಳನ್ನು ಹಾಕಿರುವ ಬಗ್ಗೆ ಈಗಾಗಲೇ ಹಲವಾರು ಪ್ರಕರಣಗಳಿರುತ್ತವೆ.

ಸಮಾಜದ ಮೇಲೆ ಮತ್ತು ನಮ್ಮ ಧಾರ್ಮಿಕ ಶ್ರದ್ಧೆಗಳನ್ನು ಘಾಸಿಗೊಳಿಸಿರುವ ಪದ್ಮನಾಭ ಸಾಮಂತ ನನ್ನು ಬಂಧಿಸಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!