ದೇಲಂತಬೆಟ್ಟು ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ದ. ಕ.ಜಿ.ಪಂ. ಉ.ಹಿ. ಪ್ರಾ ಶಾಲೆ ದೇಲಂತ ಬೆಟ್ಟು ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ 9:30ಕ್ಕೆ ಎಸ್ ಡಿಯಂಸಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬೂಬಕ್ಕರ್ ಸಿದ್ದಿಕ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ,ಸ್ವಾತಂತ್ರ ಹೋರಾಟಗಾರರ ದೇಶಭಕ್ತಿ,ರಾಷ್ಟ್ರೀಯ ಏಕತೆ ಹಾಗೂ ವಿದ್ಯಾರ್ಥಿಗಳ ಕರ್ತವ್ಯಗಳ ಕುರಿತು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಕುಂಞ ಹಾಜಿ, ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಿ.ಬಿ. ಮೊಯಿದ್ದೀನ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಡಿ.ಬಿ ಮತ್ತು ಇಬ್ರಾಹಿಂ ಬಿ.ಕೆ,ಎಸ್ ಡಿಯಂಸಿ ಸದಸ್ಯರಾದ ಅಬ್ದುಲ್ ಸಲೀಂ ಹಳೆ ವಿದ್ಯಾರ್ಥಿ ಇರ್ಷಾದ್ ಬಿ.ಕೆ, ಶಾಲಾಭಿಮಾನಿ ಸಲೀಮ್ ಮಾನಿಪ್ಪಾಡಿ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಸವಿತಾ ವಂದಿಸಿದರು ಹಾಗೂ ಶಾಲಾ ಸಾಂಸ್ಕೃತಿಕ ಸಂಘದ ನಾಯಕಿ ಕುಮಾರಿ ಶ ಆಯಿಷ ಕಾರ್ಯಕ್ರಮವನ್ನು ನಿರೂಪಿಸಿದರು.




