ಕೇರಳದಲ್ಲಿ ನಾಳೆ ಬಂದ್ ಗೆ ಪಿಎಫ್ಐ ಕರೆ
ಕಾಸರಗೋಡು: ದೇಶದೆಲ್ಲೆಡೆ ಏಕಕಾಲಕ್ಕೆ ಎನ್ ಐಎ ಪಿಎಫ್ ಐ ಸಂಘಟನೆಯನ್ನು ಕೇಂದ್ರವಾಗಿರಿಸಿ ದಾಳಿ ನಡೆಸಿದ್ದು, ಕೆಲವು ರಾಜ್ಯಗಳಲ್ಲಿ ನಾಯಕರನ್ನು ವಶಕ್ಕೆ ಪದೆದುಕೊಂಡಿದೆ. ಎನ್ ಐಎ ನಡೆಸಿದ ದಾಳಿಯನ್ನು ಖಂಡಿಸಿ ಪಿಎಫ್ ಐ ಸೆಪ್ಟೆಂಬರ್ 23ರಂದು ನಾಳೆ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ.
ನಾಳೆ ಕೇರಳದಲ್ಲಿ ಹರತಾಳ ನಡೆಯಲಿದ್ದು, ಎನ್ ಐ ಎ ದಾಳಿ, ಮುಖಂಡರ ಬಂಧನ ಪ್ರತಿಭಟಿಸಿ ಹರತಾಳ ಕ್ಕೆ ಕರೆ ನೀಡಿದೆ ಎಂದು ಪಾಪ್ಯುಲರ್ ಫ್ರಂಟ್ ತಿಳಿಸಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಹರತಾಳ ನಡೆಸಲು ನಿರ್ಧರಿಸಿದೆ.




