August 17, 2026

ಉಕ್ರೇನ್‌ನಲ್ಲಿರುವ ಲಕ್ಷ್ಮಿ ಮಿತ್ತಲ್ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಇಬ್ಬರು ಮೃತ್ಯು

0
IMG-20260817-WA0035

ಉಕ್ರೇನ್: ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ಲಕ್ಷ್ಮಿ ಮಿತ್ತಲ್ ಒಡೆತನದ ಉಕ್ರೇನ್‌ನ ಅತಿ ದೊಡ್ಡ ಉಕ್ಕು ಉತ್ಪಾದನಾ ಘಟಕವಾದ ಆರ್ಸಿಲರ್ ಮಿತ್ತಲ್ ಕ್ರಿವಿ ರಿಹ್ ಗೆ ಹಾನಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಆಗಸ್ಟ್ 16 ರಂದು ಮಧ್ಯ ಉಕ್ರೇನ್‌ನ ಕ್ರಿವಿ ರಿಹ್ ನಗರದಲ್ಲಿರುವ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಘಟಕದ ಮೇಲೆ ನಡೆದ ಈ ಕ್ಷಿಪಣಿ ದಾಳಿಯ ಪರಿಣಾಮವಾಗಿ, ಕಂಪೆನಿಯು ತನ್ನ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಬೇಕಾಯಿತು.

ವಿಶ್ವದ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದನಾ ಸಂಸ್ಥೆಯ ಉಕ್ರೇನ್ ಘಟಕವಾದ ಆರ್ಸಿಲರ್ ಮಿತ್ತಲ್, ಕ್ಷಿಪಣಿ ದಾಳಿಯಲ್ಲಿ ತನ್ನ ಒಂದು ಘಟಕ ಹಾನಿಗೊಳಗಾಗಿರುವುದನ್ನು ಖಚಿತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಕ್ರಿವಿ ರಿಹ್ ಮೇಲಿನ ರಷ್ಯಾದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವ ಮಧ್ಯೆಯೇ, ಕೀವ್ ಪಡೆಗಳು ರಷ್ಯಾದ ಪ್ರದೇಶಗಳ ಮೇಲೆಯೂ ನೂರಾರು ಡ್ರೋನ್‌ಗಳ ಮೂಲಕ ಪ್ರತ್ಯುತ್ತರ ದಾಳಿ ನಡೆಸಿವೆ. ಆದರೆ ಮಿತ್ತಲ್ ಸಮೂಹದ ಉಕ್ಕು ಕಾರ್ಖಾನೆಯ ಮೇಲಿನ ಈ ದಾಳಿಯು ಉಕ್ರೇನ್‌ನ ಕೈಗಾರಿಕಾ ವಲಯಕ್ಕೆ ಹಾಗೂ ಆರ್ಥಿಕತೆಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. 2022 ರಲ್ಲೂ ಇದೇ ಕಾರ್ಖಾನೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಅಪಾರ ಹಾನಿ ಎಸಗಿತ್ತು.

Leave a Reply

Your email address will not be published. Required fields are marked *

error: Content is protected !!