ಆಸ್ತಿ ವಿವಾದದ: ನಡು ಬೀದಿಯಲ್ಲಿ ಎಳೆದಾಡಿ ಮಹಿಳೆಗೆ ಹಲ್ಲೆ
ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ನಡು ಬೀದಿಯಲ್ಲಿ ಎಳೆದಾಡಿ, ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನಿಂದ ವರದಿಯಾಗಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ಘಟನೆ ಜರುಗಿದೆ. ಸಂಬಂಧಿಗಳೇ ತಮ್ಮ ಕುಟುಂಬದ ಮಹಿಳೆಯನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ಎಳೆದಾಡಿ ಥಳಿಸಿದ್ದಾರೆ.
ಮಹಾದೇವಿ ಫಿರಾಪೂರ ಎಂಬಾಕೆಯ ಮೇಲೆ ಬೀದಿಯಲ್ಲಿ ಹಲ್ಲೆ ನಡೆಸಲಾಗಿದೆ. ಆನಂದ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬವರು ಆಸ್ತಿ ವಿಷಯವಾಗಿ ಮಹಾದೇವಿ ಮೇಲೆ ಹಲ್ಲೆ ಮಾಡಿದ್ದಾರೆ.




