August 12, 2026

ಶೌಚಾಲಯದ ಒಳಗೆ ಊಟ ಮಾಡಿದ ಕಬಡ್ಡಿ ಆಟಗಾರರು: ವೀಡಿಯೊ ವೈರಲ್

0
image_editor_output_image-678744401-1663663886193.jpg

ನವದೆಹಲಿ: ಬಾಲಕಿಯರು ಒಳಗೊಂಡಂತೆ ಕಿರಿಯ ವಯಸ್ಸಿನ ಕಬಡ್ಡಿ ಆಟಗಾರರು ಪುರುಷರ ಶೌಚಾಲಯದ ಒಳಗೆ ಊಟ ಮಾಡುತ್ತಿರುವ ವಿಡಿಯೊ ಒಂದನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪುರುಷರ ಶೌಚಾಲಯದ ಒಳಗೆ ಬಾಲಕ, ಬಾಲಕಿಯರು ಊಟ ಮಾಡುತ್ತಿರುವುದು ದೃಶ್ಯದಲ್ಲಿದೆ. ನೆಲದ ಮೇಲೆ ಇಡಲಾದ ಅನ್ನ ಮತ್ತು ಸಾರನ್ನು ವಿದ್ಯಾರ್ಥಿಗಳು ಬಡಿಸಿಕೊಂಡು ಊಟ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಸುಳ್ಳು ಪ್ರಚಾರ ಮಾಡಲು ಕೋಟ್ಯಂತರ ರೂಪಾಯಿ ಇದೆ. ಆದರೆ ನಮ್ಮ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲು ಹಣವಿಲ್ಲ. ಇಂತಹ ಸರ್ಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ವಿಡಿಯೊದಲ್ಲಿರುವ ಬಾಲಕ ಮತ್ತು ಬಾಲಕಿಯರು ಉತ್ತರ ಪ್ರದೇಶದ ಕಬಡ್ಡಿ ಆಟಗಾರರು ಎಂದು ಕಾಂಗ್ರೆಸ್‌ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!