ಇಬ್ಬರು ಬಾಲಕಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಲಖೀಂಪುರ ಖೇರಿ (ಉತ್ತರ ಪ್ರದೇಶ): ಇಲ್ಲಿನ ನಿಘಾಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಇಬ್ಬರು ಹದಿಹರೆಯದ ಸಹೋದರಿಯರ ಮೃತದೇಹಗಳು ಅವರ ಮನೆ ಸಮೀಪದ ಜಮೀನಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಪಕ್ಕದ ಗ್ರಾಮದ ಮೂವರು ಯುವಕರು ನನ್ನ ಮಕ್ಕಳನ್ನು ಅಪಹರಿಸಿ ಕೊಂದಿದ್ದಾರೆ’ ಎಂದು ಮೃತರ ತಾಯಿ ಆರೋಪಿಸಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.




