February 3, 2026

ಟ್ರ್ಯಾಕ್ಟರ್ ಗೆ ಟ್ರಕ್ ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು, 30 ಮಂದಿ ಗಂಭೀರ ಗಾಯ

0
image_editor_output_image149639184-1663219470169.jpg

ಉತ್ತರ ಪ್ರದೇಶ : ಲಕ್ನೋ-ದೆಹಲಿ ಹೆದ್ದಾರಿಯ ಸೀತಾಪುರ ಜಿಲ್ಲೆಯ ಸಿದ್ಧೌಲಿ ಪ್ರದೇಶದಲ್ಲಿ 35 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 30 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.

ಬಾರಾಬಂಕಿ ಜಿಲ್ಲೆಯ ದೇವಾ ಷರೀಫ್ ದೇಗುಲಕ್ಕೆ ಮಗುವಿನ ಹೆಸರಿನಲ್ಲಿ ಪೂಜೆ ಮಾಡಿಸಲು ಕುಟುಂಬ ಸದಸ್ಯರು ಶಹಜಹಾನ್‌ಪುರ ರೌಜಾ ಪ್ರದೇಶದಿಂದ ಟ್ರಾಕ್ಟರ್ ಮೂಲಕ ಗುರುವಾರ ಮುಂಜಾನೆ 1:30 ರ ಸುಮಾರಿಗೆ ಹೊರಟಿದ್ದಾರೆ.

ಈ ವೇಳೆ ಬಾರಿ ಮಳೆ ಸುರಿಯುತ್ತಿದ್ದ ಪರಿಣಾಮ ರಸ್ತೆ ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಚಾಲಕ ಟ್ರ್ಯಾಕ್ಟರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ.

ಈ ವೇಳೆ ವೇಗವಾಗಿ ಬಂದ ಟ್ರಕ್ ಟ್ರ್ಯಾಕ್ಟರ್ ಟ್ರಾಲಿ ಗೆ ಢಿಕ್ಕಿ ಹೊಡೆದಿದೆ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮೂವತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!