March 24, 2026

ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಭಾರೀ ಗಾತ್ರದ ಮರ: ಬೈಕ್ ಸವಾರ ಮೃತ್ಯು, ಸಹಸವಾರನಿಗೆ ಗಾಯ

0
image_editor_output_image-208900769-1663049490958.jpg

ಬೆಳಗಾವಿ: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ ಗಾತ್ರದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡ‌ ಘಟನೆ ನಗರದ ಕೋರ್ಟ್ ರಸ್ತೆಯ ಆರ್ ಟಿಒ‌ ಸರ್ಕಲ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.‌

ಬೆಳಗಾವಿ ತಾಲೂಕಿನ ಸಿದ್ದನಹಳ್ಲಿ ಗ್ರಾಮದ ರಾಕೇಶ ಲಗಮಪ್ಪ ಸುಲದಾಳ (22 ವ) ಎಂಬ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಆಂಜನೇಯ ನಗರದ ನೇಮಿರಾಜ ಭೋಪಾಲ ಮರೆಪ್ಪನವರ ಗಾಯಗೊಂಡಿದ್ದಾನೆ.

ಎರಡೂ ದ್ವಿಚಕ್ರ ವಾಹನಗಳು ಜಖಂ ಗೊಂಡಿವೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಲೆಯ ಮೇಲೆಯೇ ಮರ ಬಿದ್ದಿದ್ದರಿಂದ ರಾಕೇಶ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!